Madhu Bangarappa: `ಮಧು ಬಂಗಾರಪ್ಪಗೆ ಕಾಂಗ್ರೆಸ್ಗೆ ಸ್ವಾಗತ : ಆದ್ರೆ ಮತ್ತೋರ್ವಗೆ ಅವಕಾಶವಿಲ್ಲ`
ಈಗಾಗಲೇ ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ವಿಚಾರ ಚರ್ಚೆಯಾಗುತ್ತಿದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಇದೆ
ಶಿವಮೊಗ್ಗ: ಆರ್‌ಎಸ್‌ಎಸ್‌ನ ಚಿಂತನ ಗಂಗಾ ಪುಸ್ತಕದಲ್ಲಿ ಹಿಂದೂ ವಿರೋಧಿ ಆಕ್ಷೇಪಾರ್ಹ ವಿಷಯಗಳಿವೆ. ಇದರಿಂದ ಹಿಂದೂ ಸಮಾಜದ ಏಕತೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್(Kimmane Ratnakar) ಯತ್ನಾಳ್ ತಮಗೆ ಮುಸ್ಲಿಂ ಸಮುದಾಯದ ಓಟ್ ಬೇಕಿಲ್ಲ ಅವರ ಮನೆಗೆ ಹೋಗುವುದಿಲ್ಲ ಎನ್ನುತ್ತಾರೆ. ಮೀಸಲಾತಿ ಬಗ್ಗೆ ಯತ್ನಾಳ ಯಾರ ವಿರುದ್ಧ ಹೋರಾಟ ಮಾಡುತ್ತಾರೆ? ಬಿಜೆಪಿ ವಿರುದ್ಧವೇ ಹೋರಾಟ ನಡೆಸಿದ್ದಾರೆ ಎಂದರು.
Farmers Protest: ರೈತರಿಂದ ಫೆ.25ರಂದು ವಿಧಾನಸೌಧ ಚಲೋ ಚಳವಳಿ..!
ಈ ಮೊದಲು ಬಿಜೆಪಿ(BJP)ಯವರು ಮುಸ್ಲಿಂ ಸಮುದಾಯದ ವಿರುದ್ಧ ಹೋರಾಟ ನಡೆಸಿದ್ದರು. ಇದೀಗ ಹಿಂದೂ ಸಮಾಜದ ವಿರುದ್ಧವೇ ಮೀಸಲಾತಿ ಹೆಸರಲ್ಲಿ ಹೋರಾಟ ನಡೆಸಿದ್ದಾರೆ. ಕಲ್ಲು ಗಣಿಗಾರಿಕೆ ಗೆ ಅನುಮತಿ ನೀಡದಿದ್ದರೆ ಹೋರಾಟ ನಡೆಸುವುದಾಗಿ ಹೇಳುವ ಶಾಸಕ ಆರಗ ಜ್ಞಾನೇಂದ್ರ ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಲಿ ಎಂದರು. ಅಲ್ಲದೇ ಆರಗ ಜ್ಞಾನೇಂದ್ರ ತಮ್ಮದೇ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾರೆ ಎಂದರೆ ಏನದು ಎಂದು ಪ್ರಶ್ನೆ ಮಾಡಿದರು?
ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡವರಿಗೆ 'ಸರ್ಕಾರದಿಂದ ಪರಿಹಾರ ಧನಕ್ಕೆ ಅರ್ಜಿ'..!
ಮೋದಿ(PM Modi) ಸರ್ಕಾರ ಇನ್ನೂ ನಾಲ್ಕು ವರ್ಷಗಳ ಕಾಲ ಮುಂದುವರಿದರೆ ದೇಶದ 10 ಕೋಟಿ ಜನ ಡಕಾಯಿತರಾಗುತ್ತಾರೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತೀರ್ಥಹಳ್ಳಿ ತಾಲ್ಲೂಕಿನ ಗ್ರಾಪಂ ಚುನಾವಣೆಯಲ್ಲಿ 5 ರಿಂದ 10 ಕೋಟಿ ರೂ. ಖರ್ಚು ಮಾಡುತ್ತಾರೆ ಎಂದರೇ ಅದಕ್ಕೆ ತನಿಖೆ ಬೇಡವೇ ಎಂದು ಕಿಮ್ಮನೆ ಪ್ರಶ್ನೆ ಮಾಡಿದರು.
Basavaraj Bommai: ಪಂಚಮಸಾಲಿ ಮೀಸಲಾತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಬೊಮ್ಮಾಯಿ!
ಅನಂತ ಕುಮಾರ್ ಹೆಗಡೆ, ಬಸವನ ಗೌಡ ಯತ್ನಾಳ ಮುಸ್ಲಿಮರ ಓಟ್ ಬೇಡ ಅಂದರೆ ಅದು ದೇಶದ್ರೋಹ ಆಗುವುದಿಲ್ಲ. ಅದೇ ಮುಸ್ಲಿಂ , ಕ್ರಿಶ್ಚಿಯನ್ ಧರ್ಮದವರು ಮಾತನಾಡಿದರೆ ಅದು ದೇಶದ್ರೋಹ ಆಗುತ್ತದೆ.
Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea
ಈಗಾಗಲೇ ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ವಿಚಾರ ಚರ್ಚೆಯಾಗುತ್ತಿದ್ದು ಅವರು ಕಾಂಗ್ರೆಸ್(Congress) ಪಕ್ಷಕ್ಕೆ ಬಂದರೆ ಸ್ವಾಗತ ಇದೆ. ಅದೇ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಕಾಂಗ್ರೆಸ್ ಪಕ್ಷಕ್ಕೆ ಬಂದರೇ ನನ್ನ ವಿರೋಧ ಇದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
Siddaramaiah: 'ಬಿಜೆಪಿಯವರು ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಅಲ್ಪಮಾನವರು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.